Dinesh holla numerologist saligrama/udupi - ಅಯತೊಲ್ಲಾ ಅಲಿ : ಒಂದು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ
ಅಯತೊಲ್ಲಾ ಅಲಿ ಖೊಮೇನಿ: ಒಂದು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ
1939 ರ "ಪ್ರಮಾಥಿ" ನಾಮ ಸಂವತ್ಸರದ ಏಪ್ರಿಲ್ 19 ನೇ ತಾರೀಕು, ಅಮಾವಾಸ್ಯೆಯಂದು ಅಯತೊಲ್ಲಾ ಅಲಿ ಖೊಮೇನಿಯ ಜನನವಾಯಿತು. ಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ವ್ಯಕ್ತಿಯ ಸ್ವಭಾವ ಮತ್ತು ಜೀವನದ ಘಟನೆಗಳು ಹೇಗೆ ರೂಪಿತವಾಗುತ್ತವೆ ಎಂಬುದರ ವಿಶ್ಲೇಷಣೆ ಇಲ್ಲಿದೆ:
1. ಮೂಲಾಂಕ ಮತ್ತು ಭಾಗ್ಯಾಂಕದ ಶಕ್ತಿಮೂಲಾಂಕ 1 (ಸೂರ್ಯ): 19 ನೇ ತಾರೀಕು ಹುಟ್ಟಿದ ವ್ಯಕ್ತಿಯ ಮೂಲಾಂಕ 1 ಆಗುತ್ತದೆ (1 + 9 = 10 =1). ಇದು ಅಪ್ರತಿಮ ಆತ್ಮವಿಶ್ವಾಸ ಮತ್ತು ರಾಜಕೀಯ ನಾಯಕತ್ವವನ್ನು ನೀಡುತ್ತದೆ.
ಭಾಗ್ಯಾಂಕ 9 (ಮಂಗಳ): ಜನ್ಮದಿನಾಂಕದ ಎಲ್ಲ ಸಂಖ್ಯೆಗಳನ್ನು ಕೂಡಿದಾಗ ಬರುವ ಮೊತ್ತ 9 ಭಾಗ್ಯಾಂಕವಾಗುತ್ತದೆ. ಇದು ವ್ಯಕ್ತಿಯನ್ನು "ಕಮ್ಯಾಂಡರ್ ಇನ್ ಚೀಫ್" ಅಥವಾ ಯುದ್ಧದ ಅಧಿಪತಿಯನ್ನಾಗಿ ಮಾಡುತ್ತದೆ.
ಪರಿಣಾಮ: ಈ 1 ಮತ್ತು 9 ರ ಸಂಯೋಜನೆಯು ಸರ್ವಾಧಿಕಾರಿ ಧೋರಣೆಯುಳ್ಳ, "ನಾನೇ ಶ್ರೇಷ್ಠ" ಎನ್ನುವ ಹಠವಾದಿ ನಾಯಕನನ್ನು ಸೃಷ್ಟಿಸುತ್ತದೆ.
2. ಚಾರ್ಟ್‌ನಲ್ಲಿ ಮಿಸ್ಸಿಂಗ್ ಸಂಖ್ಯೆಗಳ ಪ್ರಭಾವ:
ಖೊಮೇನಿಯವರ ಚಾರ್ಟ್‌ನಲ್ಲಿ 1, 3, 4, 9 ಸಂಖ್ಯೆಗಳು ಮಾತ್ರ ಇದ್ದು, 8, 7, 6, 5 ಸಂಖ್ಯೆಗಳು ಮಿಸ್ಸಿಂಗ್ ಆಗಿವೆ. ಇದು ಅವರ ವ್ಯಕ್ತಿತ್ವದ ಮೇಲೆ ಈ ಕೆಳಗಿನಂತೆ ಪ್ರಭಾವ ಬೀರಿದೆ:
ಸಂಖ್ಯೆ 5 (ಬುಧ - ಬ್ಯಾಲೆನ್ಸ್): ಸಮತೋಲನ ನೀಡುವ ಈ ಸಂಖ್ಯೆ ಇಲ್ಲದಿದ್ದಾಗ ಮತ್ತು ಅಮಾವಾಸ್ಯೆಯ ಪ್ರಭಾವದಿಂದಾಗಿ, ಧರ್ಮದ ವಿಷಯದಲ್ಲಿ ಅತಿಯಾದ ಉಗ್ರಗಾಮಿ (Extremism) ನಿಲುವುಗಳು ಮೂಡಿವೆ.
ಸಂಖ್ಯೆ 6 (ಶುಕ್ರ - ಸ್ತ್ರೀ ಶಕ್ತಿ): ಈ ಸಂಖ್ಯೆಯ ಅನುಪಸ್ಥಿತಿಯು ಸ್ತ್ರೀಯರ ಬಗ್ಗೆ ಅತ್ಯಂತ ಕಠೋರವಾಗಿ ನಡೆದುಕೊಳ್ಳಲು ಮತ್ತು ಅವರ ಹಕ್ಕುಗಳನ್ನು ದಮನ ಮಾಡಲು ಪ್ರೇರೇಪಿಸಿದೆ
ಕರ್ಮ ಮತ್ತು ಗ್ರಹಗಳ ದಂಡನೆ:
ನಮಗೆ ಅನುಗ್ರಹವಿಲ್ಲದ ಗ್ರಹಗಳಿಗೆ ವಿರೋಧವಾಗಿ ನಡೆದುಕೊಂಡಾಗ ಅದರ ಪರಿಣಾಮ ಭೀಕರವಾಗಿರುತ್ತದೆ. ಖೊಮೇನಿ ಜೀವನದ ಪ್ರಮುಖ ಘಟನೆಗಳು ಇದಕ್ಕೆ ಸಾಕ್ಷಿ:
1981 (ವಯಸ್ಸು 42): ಶನಿ ದೆಸೆ - ಶುಕ್ರ ಭುಕ್ತಿ
ಬಾಂಬ್ ಸ್ಫೋಟದ ಘಟನೆ ನಡೆಯಿತು. ಇದರಿಂದ ಬಲಗೈ (ಸೂರ್ಯ), ಗಂಟಲು (ಶುಕ್ರ) ಮತ್ತು ಧ್ವನಿ (ಬುಧ) ಶಾಶ್ವತವಾಗಿ ಹಾನಿಗೊಳಗಾದವು.
2014 (ವಯಸ್ಸು 75): ಕೇತು ದೆಸೆ - ಗುರು ಭುಕ್ತಿ
ಗುಪ್ತ ಕಾಯಿಲೆ ಕಾಣಿಸಿಕೊಂಡಿತು. ಶುಕ್ರನ ಅಧೀನ ಅಂಗವಾದ ಪ್ರೊಸ್ಟೇಟ್ (Prostate) ಗ್ರಂಥಿಯಲ್ಲಿ ಕ್ಯಾನ್ಸರ್ ಉಂಟಾಯಿತು.
2026 (ವಯಸ್ಸು 86): ಶನಿ ದೆಸೆ - ಶುಕ್ರ ಭುಕ್ತಿ
ಹಳೆಯ ಬಾಕಿಗಳನ್ನು ತೀರಿಸುವ ಸಮಯ ಬಂದಾಗ ಇಹಲೋಕದ ಯಾತ್ರೆ ಮುಕ್ತಾಯವಾಯಿತು.
ಜೀವನ ಚಕ್ರದ ಮುಕ್ತಾಯ (2026)
ಫೆಬ್ರವರಿ 28, 2026 ರಂದು ಮತ್ತೊಮ್ಮೆ ಶನಿ ದೆಸೆಯಡಿ ಶುಕ್ರ ಭುಕ್ತಿ ಬಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಶನಿ ಮತ್ತು ಶುಕ್ರರ ಕಾಂಬಿನೇಷನ್ ಹಳೆಯ ಬಾಕಿಗಳನ್ನು (Karmic Debts) ತೀರಿಸುತ್ತದೆ. ಚಾರ್ಟ್‌ನಲ್ಲಿ ಮಿಸ್ಸಿಂಗ್ ಇದ್ದ ಎಲ್ಲ ಗ್ರಹಗಳ ನೆಗೆಟಿವ್ ಎನರ್ಜಿಗಳು ಓವರ್‌ಲ್ಯಾಪ್ ಆಗಿ, ಅವರ ಜೀವನ ಚಕ್ರ (Life Cycle) ಪೂರ್ಣಗೊಂಡಿದೆ.
ಜನ್ಮದಿನಾಂಕಗಳು ನಮ್ಮ ಜೀವನದ ಹಾದಿಯನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಅಧಿಕಾರವಿದ್ದಾಗ ಸಮಾಜಕ್ಕೆ ಉಪಕಾರಿಯಾಗದಿದ್ದರೆ, ಕಾಲ ಬಂದಾಗ ಪ್ರಕೃತಿಯೇ ಅದನ್ನು ಸರಿದೂಗಿಸುತ್ತದೆ. ನಮ್ಮ ಜೀವನವನ್ನು ಜನ್ಮದಿನದ ಎನರ್ಜಿಗೆ ಸರಿಯಾಗಿ ಅಲೈನ್ ಮಾಡಿಕೊಂಡರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ.
Dinesh holla, Numerologist, Saligrama,Udupi - Whatsapp: 95919 06335/8861039229
Decode * Transform * Prosper

Comments
Post a Comment